KBA Press Releases

KBA Inauguration Press Release

ಕುರುಬರ ಬಳಗ ಆಫ್ ಅಮೇರಿಕಾದ ಉದ್ಘಾಟನಾ ಸಮಾರಂಭ ಸಮಾಜದ ಗುರುಹಿರಿಯರ, ರಾಜಕೀಯ ಧುರೀಣರ , ಸಾಮಾಜಿಕ ಕಾರ್ಯಕರ್ತರ  ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸುಸೂತ್ರವಾಗಿ ಜನವರಿ ೧೬ ೨೦೨೨ ರಂದು ಜರುಗಿತು.

ಅಮೇರಿಕಾದಲ್ಲಿನ ಹಿರಿಯರಾದ  ತಮ್ಮಯ್ಯನವರು ಎಲ್ಲರನ್ನು ಸ್ವಾಗತಿಸಿ, ತಮ್ಮ ಸ್ವಾಗತ ಭಾಷಣದಲ್ಲಿ “ಕುರುಬ ಹುಟ್ಟುವ ಮುನ್ನ ಕುಲವಿಲ್ಲ, ಗೋತ್ರವಿಲ್ಲ, ಕುರುಬನೇ ಆದಿ ಜಗಕೆಲ್ಲ” ಎಂಬುವ ಅಲ್ಲಮ ಪ್ರಭುರವರ ವಚನದೊಂದಿಗೆ ಈ ಸಮಾರಂಭವನ್ನು ಪ್ರಾರಂಭಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಗುರುಗಳಾದ ಶ್ರೀ ಶ್ರೀ ಈಶ್ವರಾನಂದಪುರಿ ಸ್ವಾಮಿಯವರು ಜ್ಯೋತಿಯನ್ನು ಬೆಳಗುವುದರೊಂದಿಗೆ ಈ ಸಂಸ್ಥೆಯ ಚಾಲನೆ ಮಾಡಿದರು. ಶ್ರೀಗಳು ತಮ್ಮ ಹಿತವಚನದಲ್ಲಿ “ವಿದ್ಯಾವಂತರಾಗಿ, ಒಗ್ಗಟ್ಟಾಗಿ, ಹೋರಾಡಿ” ಎಂಬ ಕೂಗಿನೊಂದಿಗೆ ತಾವೆಲ್ಲ ಸಮಾಜದ ಏಳಿಗೆಗಾಗಿ ದುಡಿಯಬೇಕೆಂದು ಕರೆಕೊಟ್ಟರು.

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕರಾದ  ಶ್ರೀ. ಸಿದ್ಧರಾಮಯ್ಯನವರು ಕೆಪಿಸಿಸಿ ವಕ್ತಾರರಾದ ಶ್ರೀ. ನಿಕೇತ್ ರಾಜ್ ಮೌರ್ಯರವರ ಮೂಲಕ  ಈ  ಸಂಸ್ಥಗೆ ಶುಭ ಹಾರೈಸಿದರು. ಸಮಾಜಕ್ಕಾಗಿ ಉತ್ತಮ ಕೆಲಸಗಳು ನೆರವೇರಲೆಂದು ಆಶಿಸಿದರು.

ಹಾಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ಮಂತ್ರಿಗಳಾದ ಶ್ರೀ. ಕೆ.ಎಸ್. ಈಶ್ವರಪ್ಪರವರು ಸಮಾಜದ ಸರ್ವತೋಮುಖವಾದ ಏಳಿಗೆಗಾಗಿ ಅದರಲ್ಲೂ ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕಾಗಿ ಮತ್ತು ಯುವಕರಿಗಾಗಿ ಉದ್ಯೋಗ ಕಲ್ಪಿಸಬೇಕೆಂದು ಅಪೇಕ್ಷಿಸಿದರು.

ಹಾಲಿ ಲೋಕಸಭಾ ಸದಸ್ಯರಾದ ಶ್ರೀ.ಕುರುವ ಗೋರಾಂತಳ ಮಾಧವ್, ಹಿಂದುಪುರ್, ಆಂಧ್ರಪ್ರದೇಶದಿಂದ ಈ  ಸಂಸ್ಥೆಯ ಸದುದ್ದೇಶಗಳಿಗೆ ಪ್ರೋತ್ಸಾಹ ಕೊಡುವ ಭರವಸೆಯೊಂದಿಗೆ ಶುಭಹಾರೈಸಿದರು.

ಮಾಜಿ ಮಂತ್ರಿ, ಹಾಲಿ ವಿಧಾನ ಪರಿಷತ್‌ ಸದಸ್ಯ ಹಾಗೂ ಶೆಪರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ. ಎ.ಹೆಚ್.ವಿಶ್ವನಾಥ್ ಮತ್ತು ಮಾಜಿ ಮಂತ್ರಿ, ಹಾಲಿ ವಿಧಾನಸಭೆಯ ಸದಸ್ಯರಾದ  ಶ್ರೀ. ಬಂಡೆಪ್ಪ ಕಾಶೆಂಪುರ್ ಖುದ್ದಾಗಿ ಭಾಗವಹಿಸಿ, ಸಮಾಜದ ಶ್ಯೆಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಈ ಸಂಸ್ಥೆಯು ಕೆಲಸ ಮಾಡುವುದರಲ್ಲಿ ತಮ್ಮ ಬೆಂಬಲವನ್ನು ಸೂಚಿಸಿದರು.

ಮಾಜಿ ಮಂತ್ರಿ, ಹಾಲಿ ವಿಧಾನ ಪರಿಷತ್‌ ಸದಸ್ಯರಾದ ಶ್ರೀ.ಎಚ್.ಎಂ.ರೇವಣ್ಣನವರು ಈ ಸಂಸ್ಥೆ ಒಗ್ಗಟ್ಟಾಗಿ  ಸಮಾಜಕ್ಕಾಗಿ ಕೆಲಸ ಮಾಡಲೆಂದು ಶುಭಹಾರೈಸಿದರು.

ಹಾಲಿ ವಿಧಾನಸಭಾ ಸದಸ್ಯರಾದ ಶ್ರೀ.ಭೈರತಿ ಸುರೇಶರವರು ಸಂಕ್ರಾಂತಿಯ  ಶುಭಾಶಯಗಳೊದಿಂಗೆ ಈ  ಸಂಸ್ಥೆಗೆ ಶುಭಕೋರಿದ್ದಾರೆ.

ಆಚಾರ್ಯ ಡಾಕ್ಟರ್ ನಾಗರಾಜು ಮರಿಗೌಡ — ಅಮೇರಿಕಾದಲ್ಲಿ ಹಲವಾರು ವರ್ಷ ಜೀವನ ಸಾಗಿಸಿ, ಇಂದು ಬೆಂಗಳೂರಿನಲ್ಲಿ ನೆಲೆಸಿ, ಸಮಾಜದ ಏಳಿಗೆಗಾಗಿ ತಮ್ಮದೇ ಆದ ಸಂಸ್ಥೆಯ ಮೂಲಕ ಕಾರ್ಯನಿರ್ವಹಿಸಿ ಮಾದರಿಯಾಗಿದ್ದಾರೆ. ಇವರು ಕುಲಬಾಂಧವರಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಸಮಗ್ರವಾದ  ಉತ್ತಮ ಶಿಕ್ಷಣದ ಬಗ್ಗೆ ಒತ್ತುಕೊಡಬೇಕೆಂದು ಕರೆಕೊಟ್ಟು ಶುಭಹಾರೈಸಿದರು.

ಡಾಕ್ಟರ್ ಹುಲಿ ನಾಯಕರ್ — ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ನ ಛೇರ್ಮನ್, ಈ ಸಂಸ್ಥೆಗೆ ಶುಭಕೋರಿದ್ದಾರೆ.

ಯುವಪೀಳಿಗೆಯ ಜನಾಂಗದ ನಾಯಕರಾದ ಶ್ರೀ. ನಿಕೇತ್ ರಾಜ್ ಮೌರ್ಯ ಮತ್ತು ಶ್ರೀ. ದೊಡ್ಡಯ್ಯ ಆನೇಕಲ್ ವೈಯಕ್ತಿಕವಾಗಿ ಮಾತನಾಡಿ ಶುಭಹಾರೈಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಕೇಷನ್ಸ್ ನಲ್ಲಿ ಪ್ರೊಫೆಸರ್ ಹಾಗು ಅಧ್ಯಕ್ಷರಾಗಿರುವ ಶ್ರೀ. ಬಿ.ಕೆ.ರವಿಯವರು, ಹಾಗು ಲೇಖಕರು, ಚಿಂತಕರು, ಸಂಶೋಧಕರು, ಕಾರ್ಯನಿರ್ವಾಹಕ ಅಭಿಯಂತರರು ಆಗಿರುವ ಡಾ. ಗಂಗಾಧರ ಕೊಡ್ಲಿಯವರ, ಹಾಗು ಹಾಲುಮತ ಮಹಾಸಭಾದ ಅಧ್ಯಕ್ಷರಾದ ಶ್ರೀ. ರುದ್ರಣ್ಣ ಗುಲಗುಲಿ, ಹಾಗು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ. ಸುಬ್ರಹ್ಮಣ್ಯರವರು, ಹಾಗು ಕಾಯಕಯೋಗಿ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಮಾಲೇಗೌಡರವರು ಪ್ರತ್ಯೇಕವಾಗಿ ಸಂದೇಶಗಳನ್ನು ಕಳುಹಿಸಿ ಕುರುಬರ ಬಳಗ ಆಫ್ ಅಮೇರಿಕ ಸಂಸ್ಥೆಗೆ ಶುಭ ಕೋರಿದರು.

ಜಾನಪದ ಲೋಕದಲ್ಲಿ ಜಾನಪದ ಕವಿಯೆಂದು ಹೆಸರುವಾಸಿಯಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಶ್ರೀ. ಸಿದ್ದಪ್ಪ ಬಿದರಿ ಹಾಗೂ ಜಾನಪದ ಕೋಗಿಲೆ ಎಂದು ಪ್ರಖ್ಯಾತಿಯಾಗಿರುವ ಶ್ರೀಮತಿ. ಲಕ್ಷ್ಮಿ ದೇವಮ್ಮ ಮತ್ತು ಸಾಹಿತ್ಯಲೋಕದಿಂದ ಕಾ. ತಾ. ಚಿಕ್ಕಣ್ಣನವರು ಈ ಸಂಸ್ಥೆಗೆ  ಶುಭಕೋರಿದ್ದಾರೆ.

ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಸಂಸ್ಥೆಯ ಸದಸ್ಯರೆಲ್ಲರೂ  ಪ್ರಮಾಣವಚನವನ್ನು ಸ್ವೀಕರಿಸಿ ತಮ್ಮ ಜವಾಬ್ದಾರಿಯನ್ನು ನೆರವೇರಿಸಲು ಪಣ ತೊಟ್ಟರು. ಅಧ್ಯಕ್ಷರಾಗಿ ಚುನಾಯಿತರಾದ ಶ್ರೀ. ವಿಜಯಾನಂದ ಭಾವಿಮನೆ ,  ಉಪಾಧ್ಯಕ್ಷರಾಗಿ ಶ್ರೀಮತಿ. ಯಮುನಾ ನಾಗರಾಜ್ , ಕಾರ್ಯದರ್ಶಿಯಾಗಿ ಶ್ರೀಮತಿ. ಸಪ್ನಾ ಸ್ವಾಮಿ , ಜಂಟಿ ಕಾರ್ಯದರ್ಶಿಯಾಗಿ ಶ್ರೀಮತಿ. ಶ್ವೇತ ರಾಮಮೂರ್ತಿ ಮತ್ತು ಖಜಾಂಚಿಯಾಗಿ ಶ್ರೀಮತಿ. ವಿಜಿ ಶಾಮಣ್ಣನವರು ಪದಗ್ರಹಿಸಿದರು. ಬೋರ್ಡ್ ಆಫ್ ಡೈರೆಕ್ಟರ್ಸರಾದ ಡಾಕ್ಟರ್ ಅಮರ್ ಅಮರೇಶ್, ಶ್ರೀ. ಚಂದ್ರಶೇಖರ ಲಿಂಗಯ್ಯ ನಾಗರತ್ನ, ಶ್ರೀ. ಸಮರ್ಥ್ ನಾಗರಾಜ್, ಶ್ರೀ. ಹರೀಶ್ ಪರಪ್ಪ, ಶ್ರೀ. ವೆಂಕಟೇಶ್ ಶಿವಶಂಕರಪ್ಪ, ಮತ್ತು ಶ್ರೀ. ವಿಶಾಲ್ ಕುರುವಾಂಕರವರು ಪದಗ್ರಹಣ ಮಾಡಿದರು. ಹಿರಿಯರು ಮತ್ತು ಮಾರ್ಗದರ್ಶಕರಾದಂತ ಅಡ್ವೈಸರಿ ಬೋರ್ಡ್ನ  ಸದಸ್ಯರಾದ ಶ್ರೀ. ರಾಮ ಪ್ರಸಾದ್, ಡಾಕ್ಟರ್ ತರೀಕೆರೆ ಎಲ್. ಪ್ರಸನ್ನಕುಮಾರ್ ಮತ್ತು ಶ್ರೀಮತಿ. ಯಶೋದಮ್ಮ ವಿ. ತಮ್ಮಯ್ಯನವರು ಪದಗ್ರಹಿಸಿದರು. ಶ್ರೀ. ಗೋವಿಂದರಾಜುರವರು ಎಲ್ಲರಿಗೂ ಪ್ರಮಾಣ ವಚನ ಭೋದಿಸಿದರು.

ಪದಗ್ರಹಿಸಿದ ಬಳಿಕ ಪದಾಧಿಕಾರಿಗಳು  ಒಬ್ಬೊಬ್ಬರಾಗಿ ತಮ್ಮ ವ್ಯಾಪ್ತಿಯಲ್ಲಿರುವ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಅಮೇರಿಕಾದಲ್ಲಿರುವ  ಬಹುಮುಖ ಪ್ರತಿಭೆಯುಳ್ಳ ಶ್ರೀ. ಸೋಮಶೇಖರ್ ಶಿವನಂಜಯ್ಯರವರ ಸಲಹಾ ಸಮಿತಿ ಸದಸ್ಯರ ಸಂದರ್ಶನ, ಈ ಸಂಸ್ಥೆಯ ಮುಂಬರುವ  ಕಾರ್ಯಗಳಿಗೆ ಮಾರ್ಗಸೂಚಿಯಾಗಿತ್ತು.

ಈ ಸಮಾರಂಭದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಾನಾ ದೇಶದ ಕುರುಬರ ಸಂಸ್ಥೆಗಳು, ಪ್ರಮುಖವಾಗಿ ಕರ್ನಾಟಕ ರಾಜ್ಯದಲ್ಲಿನ ಹಾಲುಮತ ಮಹಾಸಭಾ, ಕಾಯಕಯೋಗಿ ವಿಕಾಸ ವೇದಿಕೆ , ಕಾಳಿದಾಸ ಹೆಲ್ತ್ ಅಂಡ್  ಟ್ರಸ್ಟ್ , ಡೊಳ್ಳು ಚಂದ್ರು, ಇಂಟರ್ನ್ಯಾಷನಲ್ ಡೊಳ್ಳು ಆರ್ಟಿಸ್ಟ್ಸ್, ಕರ್ನಾಟಕ ಪ್ರದೇಶ ಹಾಲುಮತ ಕುರುಬ ಗೌಡರ ರಕ್ಷಣೆ ವೇದಿಕೆ, ಕುರುಬ ಸೇನೆ, ತಿಪಟೂರು ತಾಲ್ಲೂಕು ಕುರುಬಾಸ್, ಮಂಟೇಸ್ವಾಮಿ ಕನಕ ಭವನ, ಕೊಳ್ಳೇಗಾಲ ಕುರುಬರ ಪೇಜ್ ಹಾಗೂ ಮತ್ತಿತರರು ಭಾಗವಹಿಸಿ ಪ್ರೋತ್ಸಾಹ ನೀಡಿದ್ದಾರೆ.

ಅನೇಕ ಕುಲಬಾಂಧವರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾರೈಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ಪಾಲ್ಗೊಂಡು ಎಲ್ಲಾ ಭಾಗವಹಿಸಿದ ಗಣ್ಯರನ್ನು ರಂಜಿಸಿದರು.

ಈ ಕಾರ್ಯಕ್ರಮವನ್ನು ಡಾಕ್ಟರ್ ಮೈಸೂರ್ ನಾಗರಾಜ್ ಮತ್ತು ಶ್ರೀಮತಿ.ಸ್ಫೂರ್ತಿ ಶಿವಮೂರ್ತಿ ಯವರು ಸುಸೂತ್ರವಾಗಿ ಎಲ್ಲರನ್ನು ರಂಜಿಸುತ್ತಾ ನಡೆಸಿಕೊಟ್ಟರು.

ಈ ಸಮಾರಂಭವು ಡಾಕ್ಟರ್ ಮೈಸೂರ್ ನಾಗರಾಜ್ ರವರು ವಂದನೆ ಸಲ್ಲಿಸುವದರೊಂದಿಗೆ ಮತ್ತು ಶ್ರೀಮತಿ. ವಿಜಿ ಶಾಮಣ್ಣ ಮತ್ತು ಅವರ ಮಗನಾದ ಶ್ರೀ.ರಾಘವ್ ಇಂದರ್ ರವರ ಶಾಂತಿ ಸ್ತೋತ್ರದೊಂದಿಗೆ ಮುಕ್ತಾಯಗೊಂಡಿತು.